Your Language
ಪಿಸಿಓಎಸ್‌ನ ಬಗ್ಗೆ ನಿಜ ಸಂಗತಿಯನ್ನು ಹಂಚಿಕೊಳ್ಳುವುದು
+ ಪಿಸಿಓಎಸ್ ಎಂದರೇನು ?
ಸಂತಾನೋತ್ಪತ್ತಿಯ ವಯಸ್ಸಿನ ಕಾಲದಲ್ಲಿ (15-45 ವರ್ಷಗಳ ವಯಸ್ಸು) ಇಂದು ಸ್ತ್ರೀಯರು ಎದುರಿಸುತ್ತಿರುವ ಸರ್ವಸಾಮಾನ್ಯವಾದ ಸಮಸ್ಯೆಗಳ ಪೈಕಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ಒಂದಾಗಿದೆ. ಭಾರತದಲ್ಲಿ ಸಂತಾನೋತ್ಪತ್ತಿಯ ವಯಸ್ಸಿನ ಸುಮಾರು 36% ಸ್ತ್ರೀ ಜನಸಂಖ್ಯೆಯು ಪಿಸಿಓಎಸ್‌ನಿಂದ ಪೀಡಿತವಾಗಿದೆ ಅಥವಾ ನಿಖರವಾಗಿ ಸಂತಾನೋತ್ಪತ್ತಿ ವಯಸ್ಸಿನ ಗುಂಪಿನ ಪ್ರತಿ 4 ಸ್ತ್ರೀಯರಲ್ಲಿ ಒಬ್ಬಳಲ್ಲಿ ಪಾಲಿಸಿಸ್ಟಿಕ್ ಓವರಿಗಳಿವೆ ಎಂದು ಹೇಳಲಾಗುತ್ತದೆ. ಇತ್ತೀಚಿನ ಕಾಲದಲ್ಲೂ ಯಾವುದೇ ಸಾಮಾಜಿಕ ಸ್ಥಳದಲ್ಲಿ ಅಥವಾ ಮಾಧ್ಯಮಗಳಲ್ಲಿ ಅಧಿಕವಾಗಿ ಚರ್ಚಿಸಲಾಗುತ್ತಿರುವ ಸ್ತ್ರೀ ಆರೋಗ್ಯದ ಪೈಕಿ ಪಿಸಿಓಎಸ್ ಒಂದಾಗಿದೆ. ಈ ಸಮಸ್ಯೆಯು ತೀರಾ ಸಾಮಾನ್ಯವಾಗಿದೆ ಮತ್ತು ನಮ್ಮಲ್ಲಿ ಯಾರಲ್ಲೂ ಉಂಟಾಗಬಹುದು. ಇಲ್ಲಿ ಪಿಸಿಓಎಸ್‌ನ ತೊಡಕುಗಳನ್ನು ನಿಭಾಯಿಸಲು ಹಾಗೂ ತಪ್ಪಿಸಲು ನಾವು ಪ್ರಾಮುಖ್ಯವಾದ ಎಲ್ಲಾ ಸಂಗತಿಗಳನ್ನೂ ತಿಳಿದುಕೊಳ್ಳಬೇಕಾಗಿದ್ದು ಇದಕ್ಕೆ ಚಿಕಿತ್ಸೆ ಮಾಡದೆ ಬಿಟ್ಟರೆ ಬಂಜೆತನಕ್ಕೆ ಕಾರಣವಾಗಬಹುದು.

ಪಿಸಿಓಎಸ್‌ನ್ನು ಪತ್ತೆ ಹಚ್ಚಲು ಸಹಾಯ ಮಾಡುವ ಚಿಹ್ನೆಗಳು
 • ಮೊಡವೆ/ಪಿಂಪಲ್ಸ್ ಮತ್ತು ಹಿರ್‌ಸುಟಿಸಂ/ಅಧಿಕ ಕೂದಲು ಸೂಚನೆಗಳು
 • ಸ್ಥೂಲಕಾಯತೆ/ತೂಕ ಹೆಚ್ಚಳ
 • ಅನಿಯಮಿತ ಮುಟ್ಟು
 • ವಿಶೇಷತಃ ಕತ್ತು ಹಾಗೂ ಕಂಕುಳಲ್ಲಿ ಪಿಗ್ಮೆಂಟೇಶನ್
 • ಪಾಲಿಸಿಸ್ಟಿಕ್ ಒವರೀಸ್ (ಅಂಡಾಶಯಗಳಲ್ಲಿ ಸಿಸ್ಟ್ಗಳ ವಿಕಾಸ)-ಅಲ್ಟ್ರಾಸೊನೊಗ್ರಫಿಯ (ಯುಎಸ್‌ಜಿ) ಮೂಲಕ ದೃಢೀಕರಿಸಬಹುದು.

ಪಿಸಿಓಎಸ್‌ನ ಚಿಹ್ನೆಯು ಬೇಗನೆ ಆರಂಭವಾಗಬಹುದು ಆದರೆ ಹೆಚ್ಚಿನ ಪ್ರಸಂಗಗಳಲ್ಲಿ ಯೌವನಾವಸ್ಥೆಯ ತಡ ಹಂತದ ಮತ್ತು ಪ್ರೌಢಾವಸ್ಥೆಯ ಆರಂಭದ ಕಾಲಾವಧಿಯಲ್ಲಿ ಕಾಣಿಸುತ್ತದೆ. ಹೆಚ್ಚಾಗಿ ಪಿಸಿಓಎಸ್‌ನ್ನು ತಪ್ಪಾಗಿ ರೋಗ ನಿರ್ಣಯ ಮಾಡಲಾಗುತ್ತದೆ ಅಥವಾ ಮೊಡವೆ/ ಪಿಂಪಲ್ಸ್ ಮತ್ತು ಹಿರ್‌ಸುಟಿಸಂ/ಅಧಿಕ ಕೂದಲು ಬೆಳವಣಿಗೆಯಂತಹ ಚಿಹ್ನೆಗಳು ಕಾಣಿಸುವಾಗ ಅದು ಕಾಸ್ಮೆಟೊಲೊಜಿಕಲ್ ಸಂಗತಿಯೆಂದು ಸ್ವತ: ರೋಗ ನಿರ್ಣಯ ಮಾಡಲಾಗುತ್ತದೆ.

ಆದರೆ, ಅಧಿಕ ಸಂಖ್ಯೆಯ ಸ್ತ್ರೀಯರು ತಮಗೆ ಅನಿಯಮಿತ ಋತುಚಕ್ರದ ಪ್ರಕ್ರಿಯೆ ಅಥವಾ ಬಸಿರಾಗಲು ತೊಂದರೆ ಕಂಡು ಬರುವ ತನಕ ಅವರಿಗೆ ಪಿಸಿಓಎಸ್ ಇರುವುದೆಂದು ಕೂಡಾ ಗೊತ್ತಿರುವುದಿಲ್ಲ.

1) ಪಾಲಿಸಿಸ್ಟಿಕ್ ಓವರೀಸ್ (ಅಂಡಾಶಯಗಳಲ್ಲಿ ಸಿಸ್ಟ್ಸ್ಉಂಟಾಗುವುದು)
ಪ್ರತಿಯೋರ್ವ ಸ್ತ್ರೀಯರಲ್ಲೂ ಎರಡು ಅಂಡಾಶಯಗಳಿದ್ದು ಅವು ಗರ್ಭಾಶಯದ ಎರಡೂ ಪಕ್ಕದಲ್ಲಿದೆ. ಪ್ರತಿಯೊಂದೂ ಅಂಡಾಶಯವೂ ಸುಮಾರು ದೊಡ್ಡ ಮಾರ್ಬಲ್‌ನ ಗಾತ್ರದ್ದಾಗಿದೆ. ಗರ್ಭಾಶಯಗಳು ಅಂಡಗಳನ್ನು ಮತ್ತು ವಿಭಿನ್ನ ಹಾರ್ಮೋನ್‌ಗಳನ್ನು ತಯಾರಿಸುತ್ತವೆ.
ಸಾಮಾನ್ಯವಾಗಿ, ಪ್ರತಿಯೊಂದೂ ಋತುಚಕ್ರದ ಕಾಲಾವಧಿಯಲ್ಲೂ ಅಂಡಾಶಯಗಳಲ್ಲಿ ಅನೇಕ ಸಣ್ಣ ಕೋಶಕಗಳು ಬೆಳೆಯುತ್ತವೆ ಮತ್ತು ಅಂಡಗಳನ್ನು ಉಂಟುಮಾಡುತ್ತವೆ. ಋತುಚಕ್ರದ ಮಧ್ಯದಲ್ಲಿ ಅಂಡಾಶಯಗಳ ಪೈಕಿ ಒಂದರಿಂದ ಅಂಡಗಳು ಫೆಲೊಪಿಯನ್ ಟ್ಯೂಬ್‌ಗಳಿಗೆ ಬಿಡುಗಡೆಗೊಳ್ಳಲ್ಪಡುತ್ತವೆ. ಇದನ್ನು ‘ಅಂಡೋತ್ಪತ್ತಿ’ ಪ್ರಕ್ರಿಯೆ ಎಂದು ಕರೆಯಲಾಗುತ್ತದೆ. ಇತರ ಕೋಶಕಗಳು ಅಧಿಕ ಪಕ್ವಗೊಳ್ಳುತ್ತವೆ ಮತ್ತು ವಿಘಟನೆಗೊಳ್ಳುತ್ತವೆ.
ಪಿಸಿಓಎಸ್ ಇರುವ ಸ್ತ್ರೀಯರಲ್ಲಿ ಅಂಡೋತ್ಪತ್ತಿ ಉಂಟಾಗುವುದಿಲ್ಲ ಮತ್ತು ಅಂಡವು ಬಿಡುಗಡೆ ಮಾಡಲ್ಪಡುವುದಿಲ್ಲ. ಕೋಶಕಗಳು ವಿಘಟನೆಗೊಳ್ಳುವುದಿಲ್ಲ, ಆದರೆ ದ್ರವದಿಂದ ತುಂಬಿರುತ್ತವೆ ಮತ್ತು ಸೈಸ್ಟ್ ಗಳಾಗಿ ಬದಲಾಗಿ ಅವು ಸರಿ ಸುಮಾರು ದ್ರಾಕ್ಷಿಗಳ ಗೊಂಚಲಿನಂತೆ ಕಾಣಿಸುತ್ತವೆ. ಅಂಡಾಶಯಗಳು ಊದಿಕೊಳ್ಳಬಹುದು, ಕೆಲವು ಸಲ ಸಾಮಾನ್ಯಕ್ಕಿಂತ ಎರಡರಿಂದ ಐದು ಪಟ್ಟು ದೊಡ್ಡದಾಗಬಹುದು.
ನಿಮ್ಮಲ್ಲಿ ಪಾಲಿಸಿಸ್ಟಿಕ್ ಓವರೀಸ್ ಇದೆಯೇ ಅಥವಾ ಇಲ್ಲವೇ ಎಂದು ಖಚಿತ ಮಾಡಿಕೊಳ್ಳಲು ನಿಮ್ಮ ಡಾಕ್ಟರ್‌ರು ಅಲ್ಟ್ರಾಸೌಂಡ್ ಸ್ಕ್ಯಾನನ್ನು ಶಿಫಾರಸು ಮಾಡಬಹುದು.

2) ಅನಿಯಮಿತ ಮುಟ್ಟು :
ಸಂತಾನೋತ್ಪತ್ತಿಯ ವಯಸ್ಸಿನ ಓರ್ವ ಸ್ತ್ರೀಯು ಸರಾಸರಿ 28 ದಿನಗಳ ಋತುಚಕ್ರವನ್ನು ಹೊಂದಿದ್ದರೂ ಅದು 25 ರಿಂದ 35 ದಿನಗಳಿಗೆ ವ್ಯತ್ಯಾಸವಾಗಬಹುದು. ಪಿಸಿಓಎಸ್ ಇರುವ ಸ್ತ್ರೀಯರಲ್ಲಿ ಸಾಮಾನ್ಯವಾಗಿ ಮುಟ್ಟು >35 ದಿನಗಳಿಂದಲೂ ಮೇಲಿನ ಅಂತರಗಳಲ್ಲಿ (ಅನಿಯಮಿತ ಮುಟ್ಟು) ಉಂಟಾಗುತ್ತದೆ ಅಥವಾ ಆಗದೆ ಇರಬಹುದು.
ನಾವು ಇತ್ತೀಚೆಗಿನ ಅಧ್ಯಯನಗಳನ್ನು ಪರಿಗಣಿಸಿದರೆ ಪಿಸಿಓಎಸ್ ಇರುವ ಸುಮಾರು 99% ಸ್ತ್ರೀಯರಲ್ಲಿ ಅನಿಯಮಿತ ಮುಟ್ಟು ಇರುತ್ತದೆ
ನಿಮ್ಮ ಋತು ಚಕ್ರಗಳು ಅನಿಯಮಿತವಾಗಿದ್ದರೆ, ತುಂಬಾ ವಿಳಂಬವಾಗುವ ಮೊದಲೇ ಕ್ರಮ ಕೈಗೊಳ್ಳಿರಿ ಮತ್ತು ಸಾಧ್ಯವಾದಷ್ಟು ಬೇಗನೆ ದಯವಿಟ್ಟು ನಿಮ್ಮ ಡಾಕ್ಟರರ ಸಲಹೆ ಪಡೆಯಿರಿ.3) ಮೊಡವೆ/ಪಿಂಪಲ್ಸ್ ಮತ್ತು ಹಿರ್‌ಸುಟಿಸಂ/ಅಧಿಕ ಕೂದಲು ಬೆಳವಣಿಗೆ:
ಮೊಡವೆ ಮತ್ತು ಹಿರ್‌ಸುಟಿಸಂ ಪಿಸಿಓಎಸ್‌ನ ತೀರಾ ಸಾಮಾನ್ಯವಾಗಿ ಕಾಣಿಸುವ ಲಕ್ಷಣಗಳ ಪೈಕಿ ಒಂದಾಗಿವೆ. ಹಿರ್‌ಸುಟಿಸಂ ಎಂದರೆ ಸಾಮಾನ್ಯವಾಗಿ ನಿತಂಬಗಳು, ಬೆನ್ನು, ಎದೆ ಅಥವಾ ಮುಖದಲ್ಲಿ ಅಧಿಕ ಕೂದಲು ಬೆಳವಣಿಗೆಯಲ್ಲದೆ ಬೇರೇನೂ ಅಲ್ಲ. ಆದರೆ ಮೊಡವೆ ಎಂದರೆ ಒಂದು ತ್ವಚೆಯ ಕಾಯಿಲೆಯಾಗಿದ್ದು ಪಿಂಪಲ್ಸ್ ಗೆ ಸಮಾನಾದಂತಹ ಪಾಪುಲೆಸ್ ಉಂಟಾಗುತ್ತವೆ. ಮೊಡವೆ/ಪಿಂಪಲ್ಸ್ ಸಾಮಾನ್ಯವಾಗಿ ಮುಖ, ಬೆನ್ನು ಮತ್ತು ಎದೆಯಲ್ಲಿ ಕಂಡು ಬರುತ್ತವೆ. ಪಿಸಿಓಎಸ್ ಇರುವ ಸುಮಾರು 75% ಸ್ತ್ರೀಯರಲ್ಲಿ ಹಿರ್‌ಸುಟಿಸಂ ಮತ್ತು ಪಿಸಿಓಎಸ್ ಇರುವ ಸುಮಾರು 34% ಸ್ತ್ರೀಯರಲ್ಲಿ ಮೊಡವೆ/ಪಿಂಪಲ್ಸ್ ಇರುತ್ತವೆ.
ಪಿಸಿಓಎಸ್ ಇರುವಂಥಾ ಸ್ತ್ರೀಯರಲ್ಲಿ ಅಂಡಾಶಯದ ಸಿಸ್ಟ್ಸ್ ಹಾರ್ಮೋನ್‌ಲ್‌ನ ಅಸಮತೋಲನಕ್ಕೆ ಕಾರಣವಾಗುತ್ತವೆ ಆದ್ದರಿಂದ ಪುರುಷ ಹಾರ್ಮೋನ್‌ಗಳು (ಟೆಸ್ಟೊಸ್ಟೆರೋನ್‌ನಂತಹದ್ದು) ಅಧಿಕ ಉತ್ಪಾದನೆಯಾಗುತ್ತದೆ. ಅಧಿಕ ಪುರುಷ ಹಾರ್ಮೋನ್ ಮೊಡವೆ/ಪಿಂಪಲ್ಸ್ ಮತ್ತು ಹಿರ್‌ಸುಟಿಸಂ/ಅಧಿಕ ಕೂದಲು ಬೆಳವಣಿಗೆಗೆ ಕಾರಣವಾಗುತ್ತದೆ.


4) ಸ್ಥೂಲಕಾಯತೆ/ತೂಕ ಹೆಚ್ಚಳ :
ಸ್ಥೂಲಕಾಯತೆ ಅಥವಾ ನಿರಂತರ ತೂಕ ಹೆಚ್ಚಳವು ಪಿಸಿಓಎಸ್‌ನ ಸಾಮಾನ್ಯ ವೈಶಿಷ್ಟ್ಯವಾಗಿದೆ. ಪಿಸಿಓಎಸ್ ಇರುವ ಸುಮಾರು 50% ಸ್ತ್ರೀಯರು ಸ್ಥೂಲಕಾಯದವರಾಗಿದ್ದಾರೆ. ಆಹಾರ ಸೇವನೆಯ ಅಭ್ಯಾಸಗಳು ಮತ್ತು ಬದಲಾಗುತ್ತಿರುವ ಜೀವನಶೈಲಿಯು ಪಿಸಿಓಎಸ್ ಇರುವ ಸ್ತ್ರೀಯರನ್ನು ಹೆಚ್ಚು ಸ್ಥೂಲಕಾಯದವರನ್ನಾಗಿರಿಸುತ್ತದೆ.
ಸ್ಥೂಲಕಾಯತೆಯು ಪಿಸಿಓಎಸ್ ಇರುವ ಸ್ತ್ರೀಯರಲ್ಲಿ ಸಾಮಾನ್ಯವಾಗಿ ಕಂಡು ಬರುವ ಲಕ್ಷಣ ಏಕೆಂದರೆ ಅವರ ದೇಹದ ಕೋಶಗಳು ಇನ್‌ಸುಲಿನ್ ಎಂಬ ಹೆಸರಿನ ಹಾರ್ಮೋನನ್ನ್ನು ನಿಯಂತ್ರಿಸುವ ಸಕ್ಕರೆ/ಗ್ಲೂಕೋಸ್‌ಗೆ ಪ್ರತಿರೋಧಕತೆಯನ್ನು ಹೊಂದಿರುತ್ತದೆ. ಈ ಇನ್‌ಸುಲಿನ್ ಪ್ರತಿರೋಧಕತೆಯು ಕೋಶಗಳನ್ನು ಸಕ್ಕರೆ/ಗ್ಲೂಕೋಸ್ ಉಪಯೋಗಿಸುವುದನ್ನು ತಡೆಗಟ್ಟಿ ಇದು ಫ್ಯಾಟ್ H^ ಆಗಿ ಶೇಖರಿಸಲ್ಪಟ್ಟು ಸ್ಥೂಲಕಾಯತೆ ಅಥವಾ ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ.
ಸ್ಥೂಲಕಾಯತೆಯು ಹಾರ್ಮೋನುಗಳೊಳಗೆ ಅಸಮತೋಲನಕ್ಕೆ ಕೂಡ ಕಾರಣವಾಗಿ ಅದು ಮುಟ್ಟಿನ ಮೇಲೆ ಪರಿಣಾಮ ಬೀರುತ್ತದೆ. ಒಂದು ವೇಳೆ ನೀವು ಸ್ಥೂಲಕಾಯದವರಾಗಿದ್ದರೆ ಅಥವಾ ಅಧಿಕ ದೇಹ ತೂಕವನ್ನು ಹೊಂದಿದ್ದರೆ ತೂಕ ಇಳಿಸಲು ಮತ್ತು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಲು ಇದನ್ನು ಶಿಫಾರಸು ಮಾಡಲಾಗುತ್ತದೆ.

5) ಪಿಗ್ಮೆಂಟೇಶನ್, ವಿಶೇಷತ: ಕುತ್ತಿಗೆ ಮತ್ತು ಕಂಕುಳುಗಳಲ್ಲಿ :
ಪಿಸಿಓಎಸ್ ಇರುವ ಸ್ತ್ರೀಯರು ಕುತ್ತಿಗೆಯ ಹಿಂದುಗಡೆ, ಕಂಕುಳುಗಳಲ್ಲಿ, ಹಣೆಯಲ್ಲಿ, ಹಾಗೂ ದೇಹದ ಇತರ ಕೆಲವು ಭಾಗಗಳಲ್ಲಿ ಪಿಗ್ಮೆಂಟೇಶನ್ ಅಥವಾ ತ್ವಚೆಯ ಕಪ್ಪು ಬಣ್ಣದ ಪ್ಯಾಚ್‌ಗಳನ್ನು ಅನುಭವಿಸುತ್ತಾರೆ. ಇನ್‌ಸುಲಿನ್ ಹಾರ್ಮೋನ್ ರಕ್ತದಲ್ಲಿ ಅಧಿಕವಾಗಿರುವುದು ಇದಕ್ಕೆ ಕಾರಣವಾಗಿದೆ. ತಕ್ಷಣ ಸ್ತ್ರೀರೋಗತಜ್ಞರ ಸಲಹೆ ಪಡೆಯಲು ಸಲಹೆ ನೀಡಲಾಗಿದೆ.


6) ಬಂಜೆತನ:
ಬಂಜೆತನ ಎಂದರೆ ಬಸಿರಾಗಲು (ಗರ್ಭಧಾರಣೆ) ತೊಂದರೆ ಎಂದರ್ಥವಾಗಿದೆ. ಪಿಸಿಓಎಸ್ ಇದು ಈಗಿನ ಸಮಯದಲ್ಲಿ ಬಂಜೆತನದ ಒಂದು ತೀರಾ ಸಾಮಾನ್ಯವಾದ ಕಾರಣವಾಗಿದೆ. ಪಿಸಿಓಎಸ್ ಇರುವ ಸ್ತ್ರೀಯರಲ್ಲಿ ಮುಟ್ಟಿನ ಅನಿಯಮಿತತೆ ಅಥವಾ ಆಗದಿರುವಿಕೆಯು ಹೆಚ್ಚಾಗಿ ಅಂಡೋತ್ಪತ್ತಿಯಾಗದಿರುವಿಕೆಯೊಂದಿಗೆ ಜೋಡಿಕೊಂಡಿರುವುದರಿಂದ (ಅಂಡಾಶಯದಿಂದ ಅಂಡಗಳು ಉಂಟಾಗುವಿಕೆ ಮತ್ತು ಬಿಡುಗಡೆಯಾಗುವಿಕೆ), ಇದು ಬಸಿರಾಗುವಿಕೆಯ ಅಥವಾ ಗರ್ಭವತಿಯಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ನಿಮಗೆ ಬಸಿರಾಗಲು ತೊಂದರೆಯಾದರೆ ಸಲಹೆ ಸೂಚನೆಗಳನ್ನು ಕೇಳಿರಿ, ಅದು ಪಿಸಿಓಎಸ್ ಆಗಿರಬಹುದು.
+ ಚಿಕಿತ್ಸೆ ಮಾಡಲಾಗದ ಪಿಸಿಓಎಸ್ ನ ಪರಿಣಾಮಗಳಾವುವು ?
ಪಿಸಿಓಎಸ್ ಬರೇ ಕಾಸ್ಮೆಟಿಕ್ ಅಥವಾ ಮುಟ್ಟಿನ ಅವಧಿಯ ಸಮಸ್ಯೆಯಲ್ಲ ಎಂದು ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಮುಖ್ಯ ಸಂಗತಿಯಾಗಿದೆ. ಇದು ಅನೇಕ ಅಪಾಯಕಾರಿಗಳಾದ ದೀರ್ಘಕಾಲಿಕ ಸಮಸ್ಯೆಗಳು ಉಂಟಾಗುವುದಕ್ಕೆ ಕಾರಣವಾಗಬಹುದು. ಲಕ್ಷಣಗಳು ಕಾಣದಿದ್ದರೂ, ಪಿಸಿಓಎಸ್ ಇರುವ ಸ್ತ್ರೀಯು ಮುಟ್ಟುನಿಲ್ಲುವ ವಯಸ್ಸಿನ ತನಕ ಅವಳ ಆರೋಗ್ಯವನ್ನು ವಾಡಿಕೆಯಾಗಿ ಸ್ತ್ರೀರೋಗ ತಜ್ಞರಿಂದ ತಪಾಸಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.

ಚಿಕಿತ್ಸೆ ಮಾಡದ ಪಿಸಿಓಎಸ್ ಇರುವ ಸ್ತ್ರೀಯರು ಈ ಕೆಳಗಿನ ಪರಿಸ್ಥಿತಿಗಳು ಅಥವಾ ಕಾಯಿಲೆಗಳು ಉಂಟಾಗುವ ಅಧಿಕ ಅಪಾಯವನ್ನು ಹೊಂದಿದ್ದಾರೆ.
 • ಬಂಜೆತನ/ಗರ್ಭಿಣಿಯಾಗಲು ಸಾಧ್ಯವಿಲ್ಲದಿರುವುದು.
  ಈಗಾಗಲೇ ಚರ್ಚಿಸಲಾದಂತೆ, ಪಿಸಿಓಎಸ್ ಬಂಜೆತನ ಅಥವಾ ಗರ್ಭಿಣಿಯಾಗಲು ಸಾಧ್ಯವಿಲ್ಲದಿರುವುದರ ಸಾಮಾನ್ಯ ಕಾರಣವಾಗಿದೆ. ಹಾಗಾಗಿ ಭವಿಷ್ಯದ ಬಂಜೆತನದ ಅಪಾಯವನ್ನು ತಪ್ಪಿಸಲು ಪಿಸಿಓಎಸ್‌ನ್ನು ಬೇಗನೆ ರೋಗನಿದಾನ ಮಾಡಲೇಬೇಕು.
 • ಮಧುಮೇಹ
  ಪಿಸಿಓಎಸ್ ಇರುವ ಸುಮಾರು 50% ಸ್ತ್ರೀಯರು 40 ವರ್ಷ ವಯಸ್ಸಿನ ಮುಂಚೆಯೇ ಮಧುಮೇಹ ಇರುವವರು ಅಥವಾ ಮಧುಮೇಹ ಪೂರ್ವದವರಾಗಿರುತ್ತಾರೆ. ಆದ್ದರಿಂದ ನಿಮ್ಮಲ್ಲಿ ಪಿಸಿಓಎಸ್ ಇದ್ದರೆ, ಮಧುಮೇಹವನ್ನು ತಪ್ಪಿಸಲು ವ್ಯಾಯಾಮ ಮಾಡಲು ಮತ್ತು ಆಹಾರದ ಅಭ್ಯಾಸಗಳನ್ನು ಬದಲಾಯಿಸಲು ಶಿಫಾರಸು ಮಾಡಲಾಗುತ್ತದೆ. • ಉಚ್ಚ ರಕ್ತ ಕೊಲೆಸ್ಟರೋಲ್ ಮತ್ತು ಹೃದಯರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆ
  ಪಿಸಿಓಎಸ್ ಇರುವ ಸ್ತ್ರೀಯರು ಉಚ್ಚ ರಕ್ತ ಕೊಲೆಸ್ಟರೋಲ್ ಉಂಟಾಗುವ ಅಧಿಕ ಒಲವನ್ನು ಹೊಂದಿದ್ದಾರೆ. ಹೃದಯರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಯು ಕೊಲೆಸ್ಟರೋಲ್‌ನೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವುದರಿಂದ, ಪಿಸಿಓಎಸ್ ಇರುವ ಸ್ತ್ರೀಯರಲ್ಲಿ ಇಂತಹ ಕಾಯಿಲೆಯ (ಹೃದಯಾಘಾತ) ಅಪಾಯವು ಹೆಚ್ಚಬಹುದು. • ಗರ್ಭಧಾರಣೆಯ ತೊಡಕುಗಳು
  ಪಿಸಿಓಎಸ್ ಇರುವ ಸ್ತ್ರೀಯರು ಗರ್ಭಧಾರಣೆಯ ಕಾಲಾವಧಿಯಲ್ಲಿ ತೊಡಕುಗಳುಂಟಾಗುವ ಅಧಿಕ ಸಾಧ್ಯತೆಯನ್ನು ಹೊಂದಿದ್ದಾರೆ. ಇದು ಹೆಚ್ಚು ಬೇಗನೆ ಶಿಶುಗಳನ್ನು ಹಡೆಯುವ ಅಥವಾ ಗರ್ಭಧಾರಣೆಯಲ್ಲಿ ಉಚ್ಚರಕ್ತದೊತ್ತಡ ಇರುವ (ಪ್ರೀ-ಎಕ್ಲಾಂಪ್‌ಸಿಯಾ) ಅಥವಾ ಗರ್ಭಧಾರಣೆಯ ಕಾಲಾವಧಿಯಲ್ಲಿ ಮಧುಮೇಹ ಉಂಟಾಗುವುದನ್ನು ಕೂಡಾ ಒಳಗೊಂಡಿದೆ. ನಿಮ್ಮಲ್ಲಿ ಪಿಸಿಓಎಸ್ ಇದ್ದರೆ ನೀವು ವಾಡಿಕೆಯ ರೂಪದಲ್ಲಿ ನಿಮ್ಮ ತಪಾಸಣೆ ಮಾಡಿಸಿಕೊಳ್ಳಬೇಕು.


 • ಎಂಡೊಮೆಟ್ರಿಯಲ್ ಕ್ಯಾನ್ಸರ್/ಗರ್ಭಾಶಯದ ಲೈನಿಂಗ್ ನ ಕ್ಯಾನ್ಸರ್
  ಚರ್ಚಿಸಲಾದಂತೆ ಪಿಸಿಓಎಸ್ ಇರುವ ಸ್ತ್ರೀಯರಲ್ಲಿ ಅನಿಯಮಿತ ಮುಟ್ಟು ಇರುತ್ತದೆ ಅಥವಾ ಮುಟ್ಟಾಗುವುದಿಲ್ಲ. ಹಾಗಾಗಿ, ಅವರು ಗರ್ಭಕೋಶದ ಲೈನಿಂಗ್ ನ ಕ್ಯಾನ್ಸರ್ ಉಂಟಾಗುವ ಅಧಿಕ ಅಪಾಯವನ್ನು ಹೊಂದಿರಬಹುದು.ಹಾಗಾಗಿ, ನಿಮ್ಮಲ್ಲಿ ಪಿಸಿಓಎಸ್ ಇರಬಹುದೆಂಬ ಶಂಕೆ ಇದ್ದರೂ ನಿಮ್ಮ ಲಕ್ಷಣಗಳನ್ನು ದಯವಿಟ್ಟು ನಿರ್ಲಕ್ಷಿಸಬೇಡಿ. ಈ ಗೌಣ ತೊಡಕುಗಳ ಆಚೆಯೂ ನೋಡುವಂಥಾ ಮತ್ತು ನಿಮ್ಮ ಭವಿಷ್ಯದಲ್ಲಿ ಬರಬಹುದಾದ ಆರೋಗ್ಯ ಸಮಸ್ಯೆಗಳ ತೀವ್ರತೆಯನ್ನು ಮನಗಾಣುವ ಒಂದು ತುರ್ತು ಆವಶ್ಯಕತೆ ಇದೆ.

+ ಪಿಸಿಓಎಸ್‌ನ ಕಾರಣಗಳಾವುವು ?
ನಮಗೆ ಈಗ ತಿಳಿದಂತೆ ಪಿಸಿಓಎಸ್ ಅನೇಕ-ಅಂಶಗಳ ಅಸ್ತವ್ಯಸ್ಥತೆಯಾಗಿದೆ. ಈ ಕೆಳಗಿನವುಗಳು ಪಿಸಿಓಎಸ್‌ನ ಸಂಭಾವ್ಯ ಕಾರಣಗಳಾಗಿವೆ.
 • ಜೀವನ ಶೈಲಿಯಲ್ಲಿ ಬದಲಾವಣೆಗಳು: ಜಂಕ್ ಫುಡ್ಗಳಂತಹ ಅನಾರೋಗ್ಯಕರ ಆಹಾರ ಪದಾರ್ಥಗಳ ಸೇವನೆ ಮತ್ತು ವ್ಯಾಯಾಮದ ಕೊರತೆಯು ಸ್ತ್ರೀಯರಲ್ಲಿ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸ್ಥೂಲಕಾಯತೆ ಅಥವಾ ತೂಕ ಹೆಚ್ಚಳವು ಹಾರ್ಮೋನ್‌ಗಳ ಅಸಮತೋಲನಕ್ಕೆ ಕಾರಣವಾಗಿ, ಇದು ನಿಮ್ಮ ಮುಟ್ಟಿನ ಅವಧಿಗಳ ಮೇಲೆ ಪರಿಣಾಮ ಬೀರಬಹುದು.
 • ಇನ್‌ಸುಲಿನ್ ಪ್ರತಿರೋಧಕತೆ: 50-80% ಪ್ರಸಂಗಗಳಲ್ಲಿ ಇನ್‌ಸುಲಿನ್ ಪ್ರತಿರೋಧಕತೆಯು ಮುಖ್ಯಕಾರಣವಾಗಿದೆ. ಇದು ಸ್ತ್ರೀಯರಲ್ಲಿ ತೂಕ ಹೆಚ್ಚಳಕ್ಕೆ ಕೂಡಾ ಕಾರಣವಾಗಿದ್ದು ಇದು ಪಿಸಿಓಎಸ್‌ನ ಲಕ್ಷಣಗಳನ್ನು ಉಲ್ಭಣಿಸುತ್ತವೆ.
 • ಹಾರ್ಮೋನಲ್ ಅಸಮತೋಲನ: ಪಿಸಿಓಎಸ್ ಇರುವ ಸ್ತ್ರೀಯರಲ್ಲಿ ಕೆಲವು ಹಾರ್ಮೋನ್‌ನ ಅಸಮತೋಲನವು ಸಾಮಾನ್ಯವಾಗಿದೆ.
 • ಕುಟುಂಬದ ಹಿನ್ನೆಲೆ: ಓರ್ವ ಸ್ತ್ರೀಯ ತಾಯಿ, ದೊಡ್ಡಮ್ಮ ಅಥವಾ ಸಹೋದರಿಯಲ್ಲಿಯೂ ಅದು ಇರುವುದಾದರೆ/ಇದ್ದಿದ್ದರೆ ಅವಳಲ್ಲಿ ಪಿಸಿಓಎಸ್ ಉಂಟಾಗುವ ಸಾಧ್ಯತೆ ಅಧಿಕವಿದೆ.

+ ಯಾವಾಗ ಡಾಕ್ಟರರಲ್ಲಿಗೆ ಹೋಗಬೇಕು?
ನೀವು ಮೊಡವೆ/ಪಿಂಪಲ್ ಅಥವಾ ಹಿರ್‌ಸುಟಿಸಂ/ಅಧಿಕ ಕೂದಲು ಬೆಳವಣಿಗೆ ಮುಂತಾದ ಪಿಸಿಓಎಸ್‌ನ ಯಾವುದೇ ಒಂದು ಅಥವಾ ಅಧಿಕ ಚಿಹ್ನೆ ಮತ್ತು ಲಕ್ಷಣಗಳಿಂದ ಪೀಡಿತರಾದರೆ ಹತ್ತಿರದ ಕನ್‌ಸಲ್ಟಂಟರಲ್ಲಿಗೆ (ಗೈನಕಾಲೊಜಿಸ್ಟ್) ದಯವಿಟ್ಟು ಧಾವಿಸಿರಿ. ಏಕೆಂದರೆ ಪಿಸಿಓಎಸ್ ಬಂಜೆತನ, ಮಧುಮೇಹ, ಹೃದಯರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳು ಮತ್ತು ಗರ್ಭಧಾರಣೆಯ ತೊಡಕುಗಳು ಇತ್ಯಾದಿಯಂತಹ ಅನೇಕ ದೀರ್ಘಕಾಲಿನ ಸಮಸ್ಯೆಗಳು ಉಂಟಾಗುವ ಅಪಾಯವನ್ನು ಹೆಚ್ಚಿಸಬಹುದು.

ಪಿಸಿಓಎಸ್‌ನ ರೋಗ ನಿರ್ಣಯ ಬೇಗನೆ ಮಾಡುವುದು ಬಂಜೆತನದಂತಹ ನಿಮ್ಮ ಭವಿಷ್ಯದ ದೀರ್ಘಕಾಲಿಕ ಸಮಸ್ಯೆಗಳನ್ನು ತಡೆಗಟ್ಟುತ್ತದೆ. ಹಾಗಾಗಿ ತುಂಬಾ ವಿಳಂಬವಾಗುವ ಮೊದಲು ಕ್ರಮ ಕೈಗೊಳ್ಳಿರಿ.

+ ಪಿಸಿಓಎಸ್‌ಗೆ ಚಿಕಿತ್ಸೆ ಏನು ?
ಪಿಸಿಓಎಸ್‌ನ್ನು ನಿರ್ವಹಿಸಲು ಅನೇಕ ವಿಧಾನಗಳಿವೆ. ನಿರ್ವಹಣೆಯ ಆಯ್ಕೆಗಳು ಲಕ್ಷಣಗಳ ತೀವ್ರತೆಯನ್ನು ಅವಲಂಭಿಸಿರಬಹುದು.

ಜೀವನ ಶೈಲಿಯಲ್ಲಿ ಪರಿವರ್ತನೆ:

ಪಿಸಿಓಎಸ್ ಇರುವ ಸ್ತ್ರೀಯರಿಗೆ ಜೀವನ ಶೈಲಿಯಲ್ಲಿ ಆರೋಗ್ಯಕರ ಬದಲಾವಣೆ ಮಾಡುವುದು ಪರಿಸ್ಥಿತಿಯನ್ನು ನಿರ್ವಹಿಸುವುದಕ್ಕೆ ತುಂಬಾ ಸಹಾಯಕವಾಗಬಹುದು. ಹಾಗಾಗಿ ನೀವು ಸ್ಥೂಲಕಾಯದವರಾಗಿದ್ದರೂ ಅಥವಾ ತೆಳ್ಳಗಾಗಿದ್ದರೂ ಪಿಸಿಓಎಸ್ ಇರುವ ಎಲ್ಲಾ ಸ್ತ್ರೀಯರಿಗೂ ಜೀವನ ಶೈಲಿಯ ನಿರ್ವಹಣೆಯು ಮುಖ್ಯವಾಗಿದೆ.

ಆರೋಗ್ಯಕರ ಆಹಾರವನ್ನು ಪಾಲಿಸುವುದರಿಂದ ನೀವು ಪೋಷಕಾಂಶಗಳು ವಿಟಾಮಿನ್‌ಗಳು ಮತ್ತು ಖನಿಜ ಪದಾರ್ಥಗಳ ಆರೋಗ್ಯಕರ ಸೇವನೆಯನ್ನು ಪಡೆಯುತ್ತಿರುವಿರಿ ಎಂಬುದನ್ನು ದೃಢೀಕರಿಸಿ ಮಧುಮೇಹ ಮತ್ತು ಹೃದಯರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ಬರಬಹುದಾದ ದೀರ್ಘಕಾಲಿಕ ಅಪಾಯವನ್ನು ಕಡಿಮೆ ಮಾಡಬಹುದು.

ಕಡಿಮೆ ಜಿಐ ಆಹಾರವನ್ನು ಸೇವಿಸಿರಿ: ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಇರುವ ಆಹಾರಗಳನ್ನು ಸೇವಿಸುವ ಮೂಲಕ ಒಬ್ಬಳು ಅವಳ ರಕ್ತ ಸಕ್ಕರೆಗಳನ್ನು ಉತ್ತಮ ಸಮತೋಲನದಲ್ಲಿರಿಸಿಕೊಳ್ಳಬಹುದು ಮತ್ತು ಪಿಸಿಓಎಸ್‌ನ ಲಕ್ಷಣಗಳನ್ನು ಸುಧಾರಿಸಬಹುದು. ಕಡಿಮೆ ಜಿಐ ಆಹಾರಗಳು, ಇಡೀಧಾನ್ಯಗಳು, ಲೀನ್ ಪ್ರೋಟೀನ್ಸ್, ಒಣಕಾಳುಗಳು ಮತ್ತು ಬೀಜಗಳು ಮತ್ತು ಧಾರಾಳ ತಾಜಾ ಹಣ್ಣು ಹಂಪಲುಗಳು ಮತ್ತು ಸ್ಟಾರ್ಚರಹಿತ ತರಕಾರಿಗಳನ್ನು ಒಳಗೊಂಡಿದೆ. ನಿಮ್ಮ ನಿರ್ದಿಷ್ಟವಾದ ಆವಶ್ಯಕತೆಗಳಿಗೆ ಅತ್ಯುತ್ತಮ ಆಹಾರದ ಆಯ್ಕೆಗಳು ಯಾವುವು ಎಂದು ತಿಳಿದುಕೊಳ್ಳಲು ನಿಮ್ಮ ಡಾಕ್ಟರರು ಅಥವಾ ನ್ಯೂಟ್ರೀಷಿನಿಯಷ್ಟರೊಂದಿಗೆ ಮಾತನಾಡುತ್ತೀರಿ ಎಂಬುದನ್ನು ಖಾತ್ರಿಮಾಡಿಕೊಳ್ಳಿರಿ. ಕಡಿಮೆ ಕೊಬ್ಬಿನ ಆಹಾರವನ್ನು ಸೇವಿಸಲು ಕೂಡಾ ಸಲಹೆ ನೀಡಲಾಗುತ್ತದೆ.

ಒಂದು ಸಲಕ್ಕೆ ಕಡಿಮೆ, ದಿನದಲ್ಲಿ ಹೆಚ್ಚು ಸಲ ಆಹಾರ ಸೇವಿಸಿರಿ: ದಿನದಲ್ಲಿ ದಿನದಲ್ಲಿ ಕಡಿಮೆ ಪ್ರಮಾಣದಲ್ಲಿ ಅಧಿಕ ಮಧ್ಯಾಂತರಗಳಲ್ಲಿ ಆಹಾರ ಸೇವಿಸುವುದು ನಿಮ್ಮ ರಕ್ತ ಸಕ್ಕರೆಗಳನ್ನು ಸಮತೋಲನದಲ್ಲಿರಿಸಿಕೊಳ್ಳಲು ಸಹಾಯ ಮಾಡುತ್ತದೆ. ನೀವು ಪ್ರತಿ 3-4 ತಾಸುಗಳಲ್ಲಿ ತಿನ್ನುವ ಯೋಜನೆ ಮಾಡಬೇಕು.ಹೆಚ್ಚು ನೀರು ಕುಡಿಯಿರಿ: ಇನ್‌ಸುಲಿನ್‌ಗೆ ಪ್ರತಿರೋಧಕತೆಯ ಕಾರಣ ಪಿಸಿಓಎಸ್ ಇರುವ ಸ್ತ್ರೀಯರು ನೀರಿನಿಂದ ತೂಕ ಹೆಚ್ಚಳವನ್ನು ಅಥವಾ ಬೇಗನೆ ದೇಹದಲ್ಲಿ ನೀರಿನ ಅಂಶ ನಷ್ಟವಾಗುವುದನ್ನು ಅನುಭವಿಸಬಹುದು. ಹಾಗಾಗಿ ನೀವು ದಿನಕ್ಕೆ ಕನಿಷ್ಠ 8 ಗ್ಲಾಸು ನೀರು ಕುಡಿಯುವುದು ಹೆಚ್ಚು ಮುಖ್ಯವಾಗಿದೆ.ಶಾರೀರಿಕ ಚಟುವಟಿಕೆ ಅಥವಾ ವ್ಯಾಯಾಮ: ಇದು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ, ಸ್ವಯಂ ಪ್ರತಿಷ್ಠೆಯನ್ನು ಸುಧಾರಿಸುತ್ತದೆ ಮತ್ತು ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ತೂಕವನ್ನು ಕಾಪಾಡಿಕೊಳ್ಳುವುದಕ್ಕೆ ಸಹಾಯಮಾಡಲು ಸರಕಾರಿ ಮಾರ್ಗ ಸೂಚಿಗಳು ಪ್ರತಿದಿನ 30ರಿಂದ 60 ನಿಮಿಷಗಳ ಶಾರೀರಿಕ ಚಟುವಟಿಕೆಯನ್ನು ಶಿಫಾರಸು ಮಾಡುತ್ತವೆ. ಪ್ರತಿದಿನ ಕನಿಷ್ಠ 90 ನಿಮಿಷಗಳ ವ್ಯಾಯಾಮಕ್ಕೆ ಸಲಹೆ ನೀಡಲಾಗುತ್ತದೆ.


ಬರೇ ಆಹಾರದ ತಃಖ್ತೆಯನ್ನು ಪಾಲಿಸುವುದಕ್ಕಿಂತ ಶಾರೀರಿಕ ಚಟುವಟಿಕೆ ಅಥವಾ ವ್ಯಾಯಾಮದಲ್ಲಿ ಬದಲಾವಣೆಯೊಂದಿಗೆ ಆಹಾರವನ್ನು ಸಂಯೋಜಿಸುವ ಮೂಲಕ ತೂಕ ನಿರ್ವಹಣೆಯನ್ನು ಹೆಚ್ಚು ಉತ್ತಮವಾಗಿ ಸಾಧಿಸಬಹುದು.

ತೂಕವನ್ನು ಕಡಿಮೆ ಮಾಡುವ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವ ಪಿಸಿಓಎಸ್ ಇರುವ ಸ್ಥೂಲಕಾಯದ ಮತ್ತು ಅಧಿಕ ತೂಕದ ಸ್ತ್ರೀಯರು ಮಧುಮೇಹ ಮತ್ತು ಹೃದಯರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಯಂತಹ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳ ಅವರ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

ಔಷಧಗಳು:

ನೀವು ಪಿಸಿಓಎಸ್ ನಿಂದ ಪೀಡಿತರಾಗಿದ್ದರೆ, ನಿಮ್ಮ ಡಾಕ್ಟರರು ಮೈಯೊ-ಇನೊಸಿಟೋಲ್ ಮತ್ತು ಮೆಟ್ ಫಾರ್ಮಿನ್, ಆ್ಯಂಟಿ-ಮೇಲ್ ಹಾರ್ಮೋನ್ ಔಷಧಗಳು, ಗರ್ಭನಿರೋಧಕ ಗುಳಿಗೆಗಳು, ಅಂಡೋತ್ಪತ್ತಿಯನ್ನು ಉದ್ದೀಪಿಸುವ ಔಷಧಗಳು, ವಿಟಾಮಿನ್ ಡಿ ಪೂರಕಗಳು ಇತ್ಯಾದಿ ಇನ್‌ಸುಲಿನ್ ಕಡಿಮೆ ಮಾಡುವ ಔಷಧಗಳನ್ನು ತೆಗೆದುಕೊಳ್ಳುವಂತೆ ನಿಮ್ಮನ್ನು ಕೇಳಿಕೊಳ್ಳಬಹುದು. ರೋಗಿಯು ಈ ಮೇಲಿನ ಚಿಕಿತ್ಸೆಗೆ ಪ್ರತಿಸ್ಪಂದಿಸದಿದ್ದರೆ ಡಾಕ್ಟರರು ಶಸ್ತ್ರ ಚಿಕಿತ್ಸೆಯನ್ನು ಕೂಡಾ ಶಿಫಾರಸು ಮಾಡಬಹುದು.

ಯಾವುದೇ ಔಷಧಗಳನ್ನು ತೆಗೆದುಕೊಳ್ಳುವ ಮೊದಲು ದಯವಿಟ್ಟು ನಿಮ್ಮ ಅತಿ ಹತ್ತಿರದ ಸ್ತ್ರೀರೋಗ ತಜ್ಞರ ಸಲಹೆ ಪಡೆಯಿರಿ.
Social   |     |     |